ಕಲಬುರಗಿ: lಸಿಎಂ ಮಾಡೋನು ನಾನಲ್ಲ.. ಸಿಎಂ ಆಗೋನು ನಾನಲ್ಲ.. ನಗರದಲ್ಲಿ ಸಚಿವ ಆರ್.ಬಿ ತಿಮ್ಮಾಪುರ
ಕಲಬುರಗಿ : ಸಿಎಂ ಮಾಡೋನು ನಾನಲ್ಲ..ಸಿಎಂ ಆಗೋನು ನಾನಲ್ಲ.. ಸಿಎಂ ಬದಲಾವಣೆ ಮತ್ತು ಪವರ್ ಶೇರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಡಿ28 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಮೂರು ಮೂರು ಜನ ಸಿಎಂಗಳನ್ನ ನೋಡಿದ್ದೇವೆ.. ರಾಜಕೀಯ ನಾಯಕರಿಗೆ ಸಿಎಂ ಆಗೋ ಆಸೆ ಇದ್ದೆ ಇರುತ್ತೆ.. ಅದೆಲ್ಲವನ್ನ ನಿರ್ಧರಿಸೋದು ಹೈಕಮಾಂಡ್.. ಪಕ್ಷದಲ್ಲಿನ ಗೊಂದಲಗಳನ್ನ ಸಹ ಹೈಕಮಾಂಡ್ನೆ ಬಗೆಹರಿಸಲಿದೆ ಅಂತಾ ಸಚಿವ ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ