ಯಲ್ಲಾಪುರ : ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘದ ರಾಜ್ಯ ಪದಾಧಿಕಾರಿ ಆಯ್ಕೆ ಪ್ರಕ್ರಿಯೆ ಜರುಗುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನವಾಗಿದ್ದು, ಯಲ್ಲಾಪುರದ ಮಹಿಳೆಯರಿಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಒಂದಾದ, ಗೃಹಲಕ್ಷ್ಮೀ ಯೋಜನೆಗೆ ಪೂರಕವಾಗುವಂತೆ ಸರ್ಕಾರವೆ ಸಹಕಾರಿ ಸಂಘ ಸ್ಥಾಪನೆಗೆ ಮುಂದಾಗಿದ್ದು,ಚುನಾವಣಾ ಪ್ರಕ್ರಿಯೆಗಳು ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಕೆಪಿಸಿಸಿ ಸದಸ್ಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ, ವಿವೇಕ್ ಹೆಬ್ಬಾರ್ ಸೂಚನೆಯಂತೆ, ಯಲ್ಲಾಪುರ ಪಟ್ಟಣದ ರೂಪಾ ಜನಾರ್ಧನ ಪಾಟಣಕರ್ ಮತ್ತು ಮುಷರತ್ ಶೇಖ್ ಎಂಬುವರು ರಾಜ್ಯ ಪದಾಧಿಕಾರಿ ಸ್ಥಾನದ ಆಯ್ಕೆಗಾಗಿ ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದರು.