ಚಳ್ಳಕೆರೆ: ಉತ್ತರ ಭಾರತದ ನೆರೆಸಂತ್ರಸ್ಥರಿಗೆ ನಗರದಲ್ಲಿ ಮುಸ್ಲಿಂ ಸಮುದಾಯದಿಂದ ನಿಧಿ ಸಂಗ್ರಹಣೆ ಅಭಿಯಾನ
ಉತ್ತರ ಭಾರತದ ನೆರೆ ಸಂತ್ರಸ್ತರಿಗೆ ನಗರದಲ್ಲಿ ಭಾನುವಾತ ಮುಸ್ಲಿಂ ಸಮುದಾಯದಿಂದ ನೆರೆ ಸಂತ್ರಸ್ತರಿಗೆ ನಿಧಿ ಸಂಗ್ರಹಣೆ ಅಭಿಯಾನ ನಡೆಸಿದರು. ಈವೇಳೆ ಜಾಮಿಯಾ ಮಸೀದಿ ಅಧ್ಯಕ್ಷರ ಯಾಕುಬ್ ಅಲಿ ಮಾತನಾಡಿ ಉತ್ತರ ಭಾರತ ಸಂತ್ರಸ್ತರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ, ನಿಮ್ಮ ದಾನವು ಅನೇಕ ಜೀವಿಗಳಿಗೆ ನೆರವು ಮತ್ತು ಭರವಸೆ ನೀಡುತ್ತದೆ ಎಂದರು. ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಸದಸ್ಯರಾದ ಎಸ್ ಮುಜೀಬುಲ್ಲಾ, ಸಲೀಂ, ಸೈಯದ್ ಅಯುಬ್ (ರಾಜ), ಭಾಷಾ ಲಾಯರ್, ಥೋಸಿಫ್, ವಲಿ, ಅಪ್ಸರ್, ರೆಹಮಾನ್, ಜಾಫರ್, ಮುಜೀಬ್, ಖಾಮ್ರೋಜ್, ಮೌಲಾನ ನೂರುದ್ದೀನ್ ಇದ್ದರು.