ಬಳ್ಳಾರಿ: ರಮೇಶ್ ಕತ್ತಿ ಹೇಳಿಕೆ ಖಂಡಿಸಿ ನಗರದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಿಂದ ಪೊಲೀಸರಿಗೆ ದೂರು
ಬೆಳಗಾವಿಯಲ್ಲಿ ಹಿರಿಯ ಧುರೀಣ ರಮೇಶ್ ಕತ್ತಿಯವರು ವಾಲ್ಮೀಕಿ ನಾಯಕ / ಬೇಡರ ಜಾತಿಯವರ ಬಗ್ಗೆ ಅವಾಚ್ಯ ಪದಗಳಿಂದ ನಿಂದಿಸಿರುವುದನ್ನು ಖಂಡಿಸಿ, ಬಳ್ಳಾರಿಯಲ್ಲಿಂದು ವಾಲ್ಮೀಕಿ ಸಮಾಜದ ಮುಖಂಡರು ಪ್ರತಿಭಟನೆ ಸೂಚಿಸಿ, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ನಿನ್ನೆ ಭಾನುವಾರದಂದು ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣಾ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ರಮೇಶ್‌ಕತ್ತಿಯವರು ವಾಲ್ಮೀಕಿ ಸಮುದಾಯದ ಬಗ್ಗೆ ಅವ್ಯಾಚ ಪದಗಳಿಂದ ಬೈಯುವ ಮೂಲಕ ಜಾತಿಯನ್ನು ನಿಂದನೆ ಮಾಡಿ ಅವಮಾನಿಸಿದ್ದಾರೆ. ಇದು ರಾಜ್ಯದಲ್ಲಿನ ಲಕ್ಷಾಂತರ ಜನ ವಾಲ್ಮೀಕಿ/ ನಾಯಕ ಸಮುದಾಯದವರ ಮನಸ್ಸಿಗೆ ತೀವ್ರವಾಗಿ ನೋವುಂಟು ಮಾಡಿದ್ದು, ಭಾವನೆಗಳಿಗೆ ಧಕ್ಕೆಯಾಗಿದೆ. ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ