ಹುಬ್ಬಳ್ಳಿ ನಗರ: ನಗರದಲ್ಲಿ ವೋಟ್ ಚೋರ್-ಗದ್ದಿ ಛೋಡ್ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ
ಹುಬ್ಬಳ್ಳಿ-ಧಾರವಾಡ ಪೂರ್ವ-72 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಳೇ ಹುಬ್ಬಳ್ಳಿಯ ಬೀರಬಂದ ಓಣಿಯ ಮುಖ್ಯ ಸರ್ಕಲ್ನಲ್ಲಿ 'ವೋಟ್ ಚೋರ್ ಗದ್ದಿ ಛೋಡ್' ಅಭಿಯಾನದ ಸಹಿ ಸಂಗ್ರಹಣೆಗೆ ಎಐಸಿಸಿ ಕಾರ್ಯದರ್ಶಿ ಹಾಗೂ ಉಸ್ತುವಾರಿ ಮಯೂರ ಜಯಕುಮಾರ್ರವರು ಸಹಿ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎ. ಎಂ. ಹಿಂಡಸಗೇರಿ, ಕಾಂಗ್ರೆಸ್ ಮುಖಂಡರಾದ ಆನಂದ ಗಡ್ಡದೇವರಮಠ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷರಾದ ಸದಾನಂದ ವಿ. ಡಂಗನವರ ಉಪಸ್ಥಿತರಿದ್ದರು.