ಹೊಸನಗರ: ಸಂಕೂರು ಗ್ರಾಮದಲ್ಲಿ ಮರ ಬಿದ್ದು ಹಸು ಸಾವು
ಹೊಸನಗರ ತಾಲೂಕಿನ ಸಂಕೂರು ಗ್ರಾಮದ ರೈತ ಮಹಿಳೆ ಪುಷ್ಪ ಎಂಬುವವರ ಜೆರ್ಸಿ ದನ ಮೇಯಲು ಹೋದ ಸಂದರ್ಭದಲ್ಲಿ ಬೃಹತ್ ಗಾತ್ರದ ಒಣಗಿದ ಮರವೊಂದು ಏಕಾಏಕಿ ಹಸುವಿನ ಮೇಲೆ ಬಿದ್ದ ಪರಿಣಾಮ ಹಸು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ 4 ಗಂಟೆಗೆ ನಡೆದಿದೆ. ಸುಮಾರು 40 ಸಾವಿರ ರೂ. ಮೌಲ್ಯದ ದನ ಇದಾಗಿದ್ದು, ದಿಢೀರ್ ಸಂಭವಿಸಿದ ಘಟನೆಯಿಂದ ಹಸು ಒಡತಿಯ ಇಡೀ ಕುಟುಂಬ ಆತಂಕಕ್ಕೆ ಒಳಗಾಗಿದೆ. ತಾಲ್ಲೂಕು ಆಡಳಿತ ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.