ಚಳ್ಳಕೆರೆ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ನಗರದಲ್ಲಿ ಅಬಕಾರಿ ನಿರೀಕ್ಷರಿಗೆ ಕರಾವೇ ಮನವಿ
ನಗರದ ಹಾಗು ಗ್ರಾಮೀಣ ಪ್ರದೇಶದಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಮಾರಾಟ ಮಾಡುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕುವಂತೆ ನಗರದಲ್ಲಿ ಸೋಮವಾರ ಅಬಕಾರಿ ನಿರೀಕ್ಷಕರಿಗೆ ಕರಾವೇ ಪ್ರವೀಣ್ ಕುಮಾರ್ ಶೆಟ್ಟಿ ಬಣ ಮನವಿ ಸಲ್ಲಿಸಿದೆ. ನಗರದ ಬಾರ್ ಗಳಿಂದಲೇ ಗ್ರಾಮೀಣ ಪ್ರದೇಶದ ಅಂಗಡಿಗಳಿಗೆ ನೀರಿನ ಬಾಟಲ್ ಗಳಂತೆ ಮದ್ಯದ ಬಾಕ್ಸ್ ಗಳು ಸಾಗಾಟ ಮಾಡಲಾಗುತ್ತದೆ. ರಾಜಾ ರೋಷವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದರು, ಅಧಿಕಾರಿಗಳು ಗಮನಹರಿಸುತ್ತಿಲ್ಲ, ಕೂಡಲೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯ ಮಾಡಿದ್ದಾರೆ.