ಶಿರಸಿ: ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಭೀಮಣ್ಣ ಚಾಲನೆ
ಶಿರಸಿ : ಶಾಸಕ ಭೀಮಣ್ಣ ನಾಯ್ಕ ಶಿರಸಿ ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಮತ್ತು ಚರಂಡಿ ಸುಧಾರಣಾ ಕಾಮಗಾರಿಗಳಿಗಾಗಿ ಬುಧವಾರ ಭೂಮಿಪೂಜೆ ನಡೆಸಿದರು. ಒಟ್ಟೂ 2.47 ಕೋಟಿ ರೂ ಮೊತ್ತದ ಕಾಮಗಾರಿ ಕೆಲಸಕ್ಕೆ ಅವರು ಚಾಲನೆ ನೀಡಿದರು. ಶಿರಸಿಯ ವಾರ್ಡ್ ನಂ. 31ರ ಶ್ರೀರಾಮ ಕಾಲೋನಿ, ವಾರ್ಡ್ ನಂ. 30 & 31ರ ರಾಮನ ಬೈಲ್ ಮುಖ್ಯ ರಸ್ತೆ, ವಾರ್ಡ್ ನಂ. 30 ಮತ್ತು 31ರ ಇಮ್ರಾನ್ ಹನಾನ್ ಬಾರೂದ್ ಮನೆ ಸುತ್ತಮುತ್ತ, ವಾರ್ಡ್ ನಂ. 16ರ ಇಂದಿರಾ ನಗರ ಮತ್ತು ಯೂನಿಯನ್ ಹೈಸ್ಕೂಲ್ ವ್ಯಾಪ್ತಿಯಲ್ಲಿ ಹಾಗೂ ವಾರ್ಡ್ ನಂ. 18ರ ಕಸ್ತೂರಬಾ ನಗರದ ಹೆರೂರ್ ಕಾಲೋನಿಯಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸುವುದಕ್ಕೆ ಚಾಲನೆ ನೀಡಿದರು.