ಕಲಬುರಗಿ: ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡಿದ್ದಕ್ಕೆ ಟಾರ್ಗೆಟ್, ಚಹಾ ಕುಡಿಯುತ್ತಿದ್ದವರನ್ನೇ ಬಂಧನ: ನಗರದಲ್ಲಿ ದಿವ್ಯಾ ಹಾಗರಗಿ
ಪಿಎಸ್ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ಅವರ ಹಳೇ ಜೇವರ್ಗಿ ರಸ್ತೆಯಲ್ಲಿರುವ ಮನೆ ಮೇಲೆ ಕಲಬುರಗಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಜೂಜಾಟ ಆಡುತ್ತಿದ್ದರು ಎಂದು ಏಳು ಜನರನ್ನು ವಶಕ್ಕೆ ಪಡೆದ ಪ್ರಕರಣಲ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡಿದಕ್ಕೆ ಉದ್ದೇಶ ಪೂರ್ವಕವಾಗಿ ನನ್ನನ್ನ ಟಾರ್ಗೇಟ್ ಮಾಡಲಾಗಿದೆ. ಇಸ್ಪಿಟ್ ಆಡುತ್ತಿರಲಿಲ್ಲ, ಚಹಾ ಕುಡಿಯುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆಂದು ಗುರುವಾರ 8 ಗಂಟೆ ಸುಮಾರಿಗೆ ಕಿಡಿ ಕಾರಿದ್ದಾರೆ