ಬಳ್ಳಾರಿ: ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮುಂದುವರಿಸಿದ್ದಕ್ಕೆ ಆಕ್ರೋಶ ಶಿಕ್ಷಕರಿಂದ ನಗರದಲ್ಲಿದಿಢೀರ್ ಪ್ರತಿಭಟನೆ ಪ್ರತಿಭಟನಾಕಾರರ ಮನವೊಲಿಸಿದ ಜಿ.ಪಂ.ಸಿಇಒ
ಬಳ್ಳಾರಿಯಲ್ಲಿ ಜಾತಿ ಜನಗಣತಿ ಮಾಡುವುದಕ್ಕೆ ವಿರೋಧಿಸಿ ಬಳ್ಳಾರಿ ತಾಲೂಕು ಪಂಚಾಯತಿ ಕಚೇರಿ ಮುಂದೆ ಶಿಕ್ಷಕರು ಭಾನುವಾರ ಬೆಳಿಗ್ಗೆ 9ಗಂಟೆಗೆ ಪ್ರತಿಭಟನೆ ನಡೆಸಿದರು. ರಾಜ್ಯಾದ್ಯಂತ ಅ.17ಕ್ಕೆ ಜನಗಣತಿ ಮುಗಿಸಲು ಸರ್ಕಾರದಿಂದ ಆದೇಶವಿದೆ ಸಮೀಕ್ಷೆ ಪೂರ್ಣವಾಗದ ಹಿನ್ನೆಲೆ ಜನಗಣತಿ ವಿಸ್ತರಣೆಗೆ ಚರ್ಚೆ ನಡೆಯುತ್ತಿರೋ ಬೆನ್ನಲ್ಲೇ ಬಳ್ಳಾರಿಯಲ್ಲಿ ಮಾತ್ರ ಇನ್ನೆರಡು ದಿನ ಗಣತಿ ಮಾಡಲು ಆದೇಶ ನೀಡಲಾಗಿದೆ. ದೀಪಾವಳಿ ನಂತರ ಶಾಲೆ ಪ್ರಾರಂಭ ಮಾಡಬೇಕಾದ್ದು ದೀಪಾವಳಿ ರಜೆ ದಿನದಲ್ಲಿಯೂ ಗಣತಿ ಮಾಡುವಂತೆ ಆದೇಶ ಮಾಡಿದ ಹಿನ್ನೆಲೆ ಜನಗಣತಿ ಮಾಡುವ ಶಿಕ್ಷಕರಿಂದ ದಿಡೀರನೆ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಅವರು ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಕೈ ಬಿಡುವಂತೆ ಮನವಿ