*ಹುಬ್ಬಳ್ಳಿ,* ನವಲಗುಂದದ 110ಕೆವಿ ವಿದ್ಯುತ್ ಉಪಕೇಂದ್ರದಲ್ಲಿ 3ನೇ ತ್ರೈಮಾಸಿಕ ಕಾಮಗಾರಿ ನಿಮಿತ್ತ ಡಿ01 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ 11ಕೆವಿ ಮಾರ್ಗಗಳಾದ ನವಲಗುಂದ, ಅಳಗವಾಡಿ, ಯಮನೂರು, ಶಾನವಾಡ, ಕುಮಾರಕೊಪ್ಪ, ಇಬ್ರಾಹಿಂಪುರ, ಕಡದಲ್ಲಿ , ಅಮರಗೋಳ, ಸೋತಕ್ನಳ್ಳಿ, ಶಲವಡಿ, ಬಳ್ಳರು ವ್ಯಾಪ್ತಿಗೆ ಬರುವ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.