ಹುಬ್ಬಳ್ಳಿ: ಯುವತಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಇಬ್ಬರಿಗೆ ಚಾಕು ಇರಿದ ಘಟನೆ ನಗರದ ಗ್ಲೋಬಲ್ ಕಾಲೇಜು ಬಳಿ ಕಳೆದ ತಡರಾತ್ರಿ ನಡೆದಿದೆ. ಅಭಿಷೇಕ ಬಂಡಿವಡ್ಡರ್, ಮಾರುತಿ ಬಂಡಿವಡ್ಡರ್ ಚಾಕು ಇರಿತಕ್ಕೊಳಗಾದ ಯುವಕರಾಗಿದ್ದು, ದೇಶಪಾಂಡೆ ನಗರ ನಿವಾಸಿಗಳಾಗಿದ್ದಾರೆ. ಮಣಿಕಂಠ ಮತ್ತು ಆತನ ಸ್ನೇಹಿತರು ಚಾಕು ಇರಿತ ಮಾಡಿದ್ದಾರೆ. ಗಾಯಗೊಂಡ ಅಭಿಷೇಕ ಮತ್ತು ಮಾರುತಿ ಸ್ನೇಹಿತನ ಜೊತೆ ಹೋಗಿ ಆಪತ್ತಿಗೆ ಸಿಲುಕಿಕೊಂಡಿದ್ದಾರೆ. ಪವನ್ ಮತ್ತು ಮಣಿಕಂಠ ಅನ್ನೋರು ಒಂದೇ ಯುವತಿ ಪ್ರೀತಿಸುತ್ತಿದ್ದರು. ಈ ವಿಚಾರಕ್ಕೆ ಪವನ ಮತ್ತು ಮಣಿಕಂಠ ನಡುವೆ ಜಗಳವಾಗಿತ್ತು. ನಿನ್ನೆ ಮಣಿಕಂಠ ಬರ್ತಡೇ ಇತ್ತು. ಹೀಗಾಗಿ ಪವನ್ ಗೆ ಬರುವಂತೆ ಮಣಿಕಂಠ ಹೇಳಿದ್ದ. ಆಗ ಪವನ ನಿನ್ನೆ ರಾತ್ರಿ ಅಭಿಷೇಕ, ಮಾರುತಿ ಕರೆದುಕೊಂಡು ಹೋಗಿ