ಹುಬ್ಬಳ್ಳಿ ನಗರ: ನಗರದಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್ ಭಾಗಿ
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ವತಿಯಿಂದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಸೋಮವಂಶ ಕ್ಷತ್ರೀಯ ವಂಶದ ಕುಲಪುರುಷ ಶ್ರೀ ಸಜಸ್ರಾರ್ಜುನ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್,  ಮಹಾನಗರ ಜಿಲ್ಲಾ ಅಧ್ಯಕ್ಷರಾದ ತಿಪ್ಪಣ್ಣ.ಮಜ್ಜಗಿ , ಉಪಮಹಾಪೌರರು ಸಂತೋಷ.ಚವ್ಹಾಣ, ಗ್ರಾಮೀಣ ಅಧ್ಯಕ್ಷರಾದ ನಿಂಗಪ್ಪ.ಸುತಗಟ್ಟಿ , ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸೀಮಾ.ಲದ್ವಾ ,SSK ಸಮಾಜದ ಮುಖಂಡರುಗಳು , ಮಾಜಿ ಪಾಲಿಕೆ ಸದಸ್ಯರು , ಮಂಡಲ ಅಧ್ಯಕ್ಷರುಗಳು , ಮಹಿಳಾ ಮೋರ್ಚಾ ಪದಾಧಿಕಾರಿಗಳು , ಯುವಮೋರ್ಚಾ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.