ಹರಿಹರ: ಜೋಶಿಯವರು ಲಿಂಗಾಯತ, ಸಮಾಜದ ನಾಯಕರನ್ನ ವ್ಯವಸ್ಥಿತ ತುಳಿಯುವ ಕೆಲಸ ಮಾಡಿದ್ದಾರೆ ;ಹರಿಹರದ ಪಂಚಮಸಾಲಿ ಮಠದಲ್ಲಿ ದಿಂಗಾಲೇಶ್ವರ ಶ್ರೀಗಳು
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಹೊರವಲಯದ ಪಂಚಮಸಾಲಿ ಮಠಕ್ಕೆ ಗದಗ್ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಶ್ರೀ ಗಳು ಆಗಮಿಸಿದರು. ಬಳಿಕ ಮಾತನಾಡಿದ ಅವರು. ಲಿಂಗಾಯತ, ಸಮಾಜದ ನಾಯಕರನ್ನ ವ್ಯವಸ್ಥಿತ ತುಳಿಯುವ ಕೆಲಸ ಮಾಡಿದ್ದಾರೆ.ಲಿಂಗಾಯತ ಸಮಾಜ, ನಾಯಕರ ಬಗ್ಗೆ, ಸ್ವಾಮೀಜಿ ಗಳ ಬಗ್ಗೆ ಅಪ ಪ್ರಚಾರ ಮಾಡ್ತಾ ಬರೋದು ಎಲ್ಲರಿಗೂ ಗೊತ್ತಿದೆ ನಮ್ಮ ಬಗ್ಗೆ ನಡೆಯುವ ಅಪ ಪ್ರಚಾರ ಜೋಶಿ ಅವರಿಂದ ನಡೆಯುತ್ತಿದೆ ಅವರು ಏನೋ ಅಪ ಪ್ರಚಾರ ಮಾಡಿದರು ಬಗ್ಗುವಂತ ಕುಗ್ಗುವಂತ ಮನಸ್ಥಿತಿ ನಮ್ಮದಲ್ಲ ಎಂದು ಹೇಳಿದರು.