ಕಲಬುರಗಿ : ಯಡ್ರಾಮಿ ತಾಲ್ಲೂಕಿನ ಪತ್ರಕರ್ತ ಪ್ರಶಾಂತ ಚವ್ಹಾಣ್ ಮೇಲೆ ಹಲ್ಲೆ ಪ್ರಕರಣದ ಆರೋಪಿಗಳನ್ನು ತಕ್ಷಣಕ್ಕೆ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಜಿಲ್ಲಾ ಬಂಜಾರ ಸೇವಾ ಸಂಘದ ಬಿ ಬಿ ನಾಯಕ ಆಗ್ರಹಿಸಿದ್ದಾರೆ. ಡಿ10 ರಂದು ಮಧ್ಯಾನ 1 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಹಲ್ಲೆ ಮಾಡಿದ ವ್ಯಕ್ತಿಗಳು ಪ್ರಶಾಂತ ಚವ್ಹಾಣ ಇವರ ಮನೆಯ ಸುತ್ತ ಓಡಾಡುವ ಮೂಲಕ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ, ಈ ಕೂಡಲೇ ಅವರು ಕುಟುಂಬಕ್ಕೆ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು..