ಕೃಷಿ ಇಲಾಖೆ ಜಾಗೃತ ಕೋಶದ ಅಧಿಕಾರಿಗಳು ಶ್ರೀ ಸೋಮೇಶ್ವರ ಫರ್ಟಿಲೈಸರ್ ಪ್ರೈ, ಲಿ. ಹಾಗೂ ಟ್ರೇಡಿಂಗ್ ಸಂಸ್ಥೆ ಗೋದಾಮಿನ ಮೇಲೆ ದಾಳಿ ನಡೆಸಿ 147 ಟನ್ ರಸಗೊಬ್ಬರ ಹಾಗೂ ಅನ್ಯ ಕಂಪನಿಯ ಲೇಬಲ್ ಉಳ್ಳ 64750 ಹೊಸ ಖಾಲಿ ಚೀಲಗಳನ್ನು ವಶಪಡಿಸಿಕೊಂಡಿರುವ ಘಟನೆ ಸೋಮನಹಳ್ಳಿಯಲ್ಲಿ ಜರುಗಿದೆ. ಸಂಸ್ಥೆಯ ರಸಗೊಬ್ಬರ ಮಿಶ್ರಣ ತಯಾರಿಕಾ ಘಟಕ ಗೋದಾಮಿನಲ್ಲಿ ಐಪಿಎಲ್ ಸಂಸ್ಥೆಯ 147 ಟನ್ ಎನ್.ಪಿ.ಕೆ ಕಾಂಪ್ಲೆಕ್ಸ್ 16:16:16 ರಸಗೊಬ್ಬರ ಹಾಗೂ ಐಪಿಎಲ್ ಸಂಸ್ಥೆಯ 16:16:16 ರಸಗೊಬ್ಬರದ ಲೇಬಲ್ ಇರುವ 64750 ಹೊಸ ಖಾಲಿ ಚೀಲಗಳನ್ನು ರಸಗೊಬ್ಬರ (ನಿರವಯವ, ಸಾವಯವ ಹಾಗೂ ಮಿಶ್ರಿತ) ನಿಯಂತ್ರಣ ಆದೇಶ 1985 ಹಾಗೂ ನಿಯಮ ಉಲ್ಲಂಘನೆಗಾಗಿ ಜಪ್ತು ಮಾಡಿ ಕಾನೂನು ಕ್ರಮ ವಹಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.