ಮುಧೋಳ: ಸುರಿದ ಮಳೆಗೆ ತಾಲೂಕಿನ ಅಂತಾಪುರ ಗ್ರಾಮದಲ್ಲಿ ಕುರಿಮರಿಗಳ ಸಾವು
ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಅತಿಯಾದ ಶೀತದಿಂದ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಅಂತಾಪುರ ಗ್ರಾಮದಲ್ಲಿ ೫ಕುರಿಮರಿಗಳು ಮೃತಪಟ್ಟಿವೆ. ಗ್ರಾಮದ ಕಾಶಪ್ಪ ಗಡದಾರ ಎಂಬುವರ ಕುರಿಮರಿಗಳು ಅತಿಯಾದ ಚಳಿಗೆ ಮೃತಪಟ್ಟಿವೆ.ಶುಕ್ರವಾರ ರಾತ್ರಯಿಡೀ ಮಳೆ ಸುರಿದು ಹೆಚ್ಚು ತಂಪಾದ ವಾತಾವರಣ ನಿರ್ಮಾಣವಾಗಿದ್ದರಿಂದ ಮೃತಪಟ್ಟಿವೆ ಎಂದು ಸೆ.೨೭ ಮುಂಜಾನೆ ೮ ಗಂಟೆಗೆ ಮಾಹಿತಿ ಬಂದಿದೆ.