ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿ ವಿಲಾಸ ಸಾಗರ ತುಂಬಿ ಕೋಡಿ ಬಿದ್ದ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ರಿಂದ ಬಾಗೀಣ ಅರ್ಪಣೆ ಮಾಡಿದ್ದಾರೆ. 2025 ಸಾಲಿನಲ್ಲಿ ದಾಖಲೆ 2 ಬಾರಿ ಡ್ಯಾಮ್ ಭರ್ತಿಯಾಗಿ ಕೋಡಿ ಬಿದ್ದಿದೆ.1907 ರಿಂದ ಈ ವರೆಗೆ ನಾಲ್ಕು ಬಾರಿ ಡ್ಯಾಮ್ ಭರ್ತಿಯಾಗಿದೆ.ಜಿಲ್ಲೆಯ ಶಾಸಕರಾದ ಬಿಜಿ ಗೋವಿಂದಪ್ಪ, ಟಿ.ರಘುಮೂರ್ತಿ, ಎಂ.ಚಂದ್ರಪ್ಪ ಕೂಡಾ ಬಾಗೀನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಸಾಥ್ ನೀಡಿದರು. ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಿದ್ದ ವಿವಿ ಸಾಗರಕ್ಕೆ ಹಾಲು ತುಪ್ಪ ಹಾಕಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.