ಕುಂದಗೋಳ: ಬಿಳೇಬಾಳ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಎಂ.ಆರ್.ಪಾಟೀಲ್
ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ - ಇಂದು ಕುಂದಗೋಳ ಕ್ಷೇತ್ರದ ಬಿಳೇಬಾಳ ಗ್ರಾಮದಲ್ಲಿ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನ ಹಾಗೂ ಗ್ರಾಮದೇವತೆ ಶ್ರೀ ದುರ್ಗಾದೇವಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಶಾಸಕರಾದ ಎಂ.ಆರ್.ಪಾಟೀಲ್ ಅವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. .ಈ ಸಂದರ್ಭದಲ್ಲಿ ಹಿರಿಯರಾದ ಮಲ್ಲಪ್ಪ ತಡಸದ, ಶಂಕರಗೌಡ ನಿಜಲಿಂಗೌಡ, ಭೀಮನಗೌಡ ಪಾಟೀಲ್, ಮಾಲತೇಶ್ ಶ್ಯಾಗೋಟಿ, ರವಿಗೌಡ ಪಾಟೀಲ, ನಿಂಗನಗೌಡ ಕೃಷ್ಣಗೌಡರ, ಶಿಕ್ಷಕರಾದ ನಿಂಗಪ್ಪ ಮಡಿವಾಳರ್ ಹಾಗೂ ಗ್ರಾಮದ ಗುರುಹಿರಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.