ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅನ್ವರ್ ಅರಳಿಕಟ್ಟಿ ಎಂಬಾತನ ಮೇಲೆಯೇ ಚಾಕು ಇರಿತವಾಗಿದೆ. ವಾಸೀಂ ಕುಂದಗೋಳ ಎಂಬಾತ ಚಾಕು ಇರಿದಿದ್ದಾನಂತೆ. ಸುಮ್ ಸುಮ್ಮೆ ಗುರಾಯಿಸಿದ ಎಂಬ ಕಾರಣಕ್ಕೆ ವಾಸೀಂ ಕುಂದಗೋಳ ಅನ್ವರ್ಗೆ ಮನಬಂದಂತೆ ಚಾಕು ಇರಿದಿದ್ದಾನೆ ಎಂದು ಹೇಳಲಾಗುತ್ತಿದೆ. ಗಾಯಗೊಂಡಿರುವ ಅನ್ವರ್ ಹುಬ್ಬಳ್ಳಿಯ ಕೆಎಂಸಿಆರ್.ಐ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.