ಹೆಬ್ರಿ: ಪಟ್ಟಣದ ನಾಲ್ಕೂರಿನಲ್ಲಿ ಅಣ್ಣ, ತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯ
Hebri, Udupi | Mar 31, 2024 ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರಿನಲ್ಲಿ ಅಣ್ಣ ತಮ್ಮಂದಿರ ನಡುವೆ ಕ್ಷುಲ್ಲಕ ಕಾರಣಕ್ಕೆ ಶನಿವಾರ ಜಗಳ ನಡೆದು ಅಣ್ಣ ಮಂಜುನಾಥ ನಾಯ್ಕ ಕೊಲೆಯಲ್ಲಿ ಅಂತ್ಯವಾಗಿದೆ. ರವಿವಾರ ಬೆಳಿಗ್ಗೆ ಕುಟುಂಬಸ್ಥರಿಗೆ ಈ ವಿಷಯ ತಿಳಿದುಬಂದಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಹೋದರ ವಿಶ್ವನಾಥ ನಾಯ್ಕನನ್ನು ಬಂಧಿಸಲಾಗಿದೆ.