ಯಲ್ಲಾಪುರ: ಅಶ್ವನ ಪಿಂಟೋ,ಅಪೂರ್ವ ಭಾಗ್ವತ ಚದುರಂಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಯಲ್ಲಾಪುರ : ಶಿರಸಿಯಲ್ಲಿ ನಡೆದ 14ವರ್ಷ ವಯೋಮಿತಿಯ ಬಾಲಕರ ಚೆಸ್ ಸ್ಪರ್ಧೆಯಲ್ಲಿ ಬೀಗಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾದ ಅಶ್ವನ ಪಿಂಟೋ ಹಾಗೂ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ 14ವರ್ಷ ವಯೋಮಿತಿಯ ಬಾಲಕಿಯರ ಚದುರಂಗ ಸ್ಪರ್ಧೆಯಲ್ಲಿ ಅಪೂರ್ವ ಭಾಗ್ವತ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗ್ರಾಮೀಣ ಪ್ರದೇಶದ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ ಇವರ ಸಾಧನೆಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ, ಕಾರ್ಯದರ್ಶಿ, ಮುಖ್ಯಾಧ್ಯಾಪಕರು, ಹಾಗೂ ಶಿಕ್ಷಕ ವೃಂದದವರು,ಪಾಲಕರು ಹರ್ಷ ವ್ಯಕ್ತ ಪಡಿಸಿದ್ದಾರೆ.