ಶಿವಮೊಗ್ಗ: ನನ್ನ ಮಗಳಿಗೆ ಚಿತ್ರ ಹಿಂಸೆ ಕೊಂದಿದ್ದಾರೆ, ಅವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಶಿವಮೊಗ್ಗದಲ್ಲಿ ಪೂಜಾ ತಂದೆ ಈಶ್ವರಪ್ಪ ಆಗ್ರಹಿಸಿದ್ದಾರೆ
ನನ್ನ ಮಗಳಿಗೆ ಚಿತ್ರ ಹಿಂಸೆ ಕೊಂದಿದ್ದಾರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮೃತ ಪೂಜಾ ತಂದೆ ಈಶ್ವರಪ್ಪ ಆಗ್ರಹಿಸಿದ್ದಾರೆ. ಶಿವಮೊಗ್ಗದಲ್ಲಿ ಶುಕ್ರವಾರ ಸಂಜೆ 4:30 ಕ್ಕೆ ಮಾತನಾಡಿದ ಅವರು, ಎನ್.ಆರ್.ಪುರ ಪೊಲೀಸರಿಗೆ ಮಗಳದ್ದು ಆತ್ಮಹತ್ಯೆ ಅಲ್ಲ. ಅವರೇ ವಿಷ ಕೊಟ್ಟು ಕೊಲೆ ಮಾಡಿದ್ದಾರೆಂದು ದೂರು ನೀಡಿದ್ದೇವೆ, ನನ್ನ ಅಳಿತ ಶರತ್ ಮತ್ತು ಪೂಜಾ ಮಾವ ಸುಧಾಕರ್ ಅವರ ಅತ್ತೆ ರಾಧಾ, ಅಕ್ಕ ಶಬರಿ ನನ್ನ ಮಗಳು ಪೂಜಾಳ ಸಾವಿಗೆ ಕಾರಣ, ಅವರು ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳು ನೀಡ್ತಿದ್ರು, ಹಣ ತೆಗೆದುಕೊಂಡು ಬಾ ಅಂತಾ ಹಿಂಸೆ ಕೊಡ್ತಿದ್ರು, ನನ್ನ ಮಗಳನ್ನ ಕೊಂದು ಎಲ್ಲರಿಗೂ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.