ಹುಬ್ಬಳ್ಳಿ: ಹಳೇ ಬಸ್ ನಿಲ್ದಾಣದಲ್ಲಿ ಧಾರವಾಡಕ್ಕೆ ಹೋಗಲು ಬಸ್ ಹತ್ತುವ ಸಂದರ್ಭದಲ್ಲಿ ಮಹಿಳೆಯೊಬ್ಬರ ೧,೮೦ ಲಕ್ಷ ಮೌಲ್ಯದ ಆಭರಣ ಕಳ್ಳತನ ಮಾಡಿದ ಘಟನೆ ನಡೆದಿದೆ. ನೂರಜಹಾನ್ ಮಜೀದಖಾನ ಬಿರಾದಾರ ಎಂಬುವರ ಬ್ಯಾಗನಲ್ಲಿದ್ದ ಆಭರಣ ಕಳ್ಳತನ ಮಾಡಲಾಗಿದೆ. ಧಾರವಾಡಕ್ಕೆ ಹೋಗಲು ಅಕ್ಕ ಸಾಹೀರಾಬಾನು ಅವರೊಂದಿಗೆ ಆನಂದನಗರದಿAದ ಹಳೇಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಂದ ಧಾರವಾಡ ಬಸ್ ಹತ್ತುವ ಗದ್ದಲದಲ್ಲಿ ವ್ಯಾನಿಟಿ ಬ್ಯಾಗನಲ್ಲಿದ್ದ ೩೯.೨೪೫ ಮಿಲಿ ಗ್ರಾಂ ಬಂಗಾರದ ನಕ್ಲೇಸ್ನ್ನು ಕಳ್ಳತನ ಮಾಡಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ---