ಹುಬ್ಬಳ್ಳಿ : ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬೂತ್ ಮಟ್ಟದಲ್ಲಿ ಏಜೆಂಟರನ್ನು ನೇಮಿಸಲು ಧಾರವಾಡ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಪಕ್ಷದ ಅಧೀಕೃತ ಪ್ರತಿನಿಧಿಗಳನ್ನು ನೇಮಿಸಲಾಗಿದೆ. ಈ ಮೂಲಕ ನಾಯಕತ್ವ ಕೊರತೆಯಲ್ಲಿರುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಸಮಸ್ಯೆಯನ್ನು ಕೆಪಿಸಿಸಿ ಅಧ್ಯಕ್ಷ ರಾಜ್ಯದ ಉಪಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ಬಗೆಹರಿಸಿದ್ದಾರೆ. ತೀವ್ರ ಹಗ್ಗಜಗ್ಗಾಟದಲ್ಲಿ ಇದ್ದ ಸೆಂಟ್ರಲ್ ಕ್ಷೇತ್ರದ ನಾಯಕತ್ವವನ್ನು ಕೊನೆಗೆ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರ ಹೆಗಲಿಗೆ ಹಾಕಲಾಗಿದೆ.ನಗರ ಘಟಕದ ಮೂರು ವಿಧಾನಸಭಾ ಕ್ಷೇತ್ರದ ಬಿಎಲ್ಎಗಳನ್ನು ನೇಮಿಸುವ ಅಧಿಕಾರವನ್ನು ಆಯಾ ಕ್ಷೇತ್ರದ ಉಸ್ತುವಾರಿಗಳಿಗೆ ನೀಡಲಾಗಿದ್ದು ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷ