ಔರಾದ್: ಎಕ್ಲಾರ್ ಸರ್ಕಾರಿ ಶಾಲೆ, ಪ್ರಾಂಗಣದಲ್ಲಿ ಸಾಲುಮರದ ತಿಮ್ಮಕ್ಕ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಎಕ್ಲಾರದಲ್ಲಿ ಪಿಡಿಒ ವಿಜಯಲಕ್ಷ್ಮಿ ಪಾಟೀಲ್
Aurad, Bidar | Nov 29, 2025 ಎಕ್ಲಾರ್ ಸರ್ಕಾರಿ ಪ್ರೌಢಶಾಲೆ ಪಂಗಡದಲ್ಲಿ ಸಾಲುಮರದ ತಿಮ್ಮಕ್ಕ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ವಿಜಯಲಕ್ಷ್ಮಿ ಪಾಟೀಲ್ ಭರವಸೆ ನೀಡಿದರು. ತಾಲೂಕಿನ ಅಟ್ಲಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಮಧ್ಯಾಹ್ನ 1ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ ಸಾಲುಮರದ ತಿಮ್ಮಕ್ಕ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಮ್. ಅಮರವಾಡಿ ಮೊದಲಾದವರಿದ್ದರು.