ಸಿರವಾರ: ಅಮೀನಗಡ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒನನ್ನು ಪಂಚಾಯಿತಿ ಕೊಠಡಿಯಲ್ಲಿ ಕೂಡಿಹಾಕಿದ ಅಧ್ಯಕ್ಷೆ
Sirwar, Raichur | Mar 26, 2024 ಅಮೀನಗಡ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಿಡಿಒ ಅವರನ್ನು ಪಂಚಾಯಿತಿ ಕೊಠಡಿಯಲ್ಲಿ ಕೂಡಿಹಾಕಿ ಕೀಲಿ ಹಾಕಿದ ಘಟನೆ ಮಂಗಳವಾರ ನಡೆದಿದೆ. ಎಂದಿನಂತೆ ಕಚೇರಿಯಲ್ಲಿ ಅಧ್ಯಕ್ಷೆ ಬಸವಲಿಂಗಮ್ಮ ತಮ್ಮ ಕಚೇರಿಯಲ್ಲಿ ಇದ್ದಾಗ ಪಿಡಿಒ ಕೃಷ್ಣ ಹುನುಗುಂದ ಅವರನ್ನು ಕರೆದಿದ್ದಾರೆ. ಇದಕ್ಕೆ ಕೃಷ್ಣ ನಿರಾಕರಿಸಿದ್ದಾರೆ. ಸಿಟ್ಟಿಗೆದ್ದ ಬಸವಲಿಂಗಮ್ಮ ಅವರು ಪಿಡಿಒ ಮತ್ತು ಇತರರು ಪಂಚಾಯಿತಿ ಒಳಗಡೆಯಿದ್ದಾಗ ಕೀಲಿ ಹಾಕಿದ್ದಾರೆ. ಪಿಎಸ್ಐ ನಾಗಪ್ಪ ಸ್ಥಳಕ್ಕೆ ಆಗಮಿಸಿ, ಅಧ್ಯಕ್ಷೆಯಿಂದ ಕೀಲಿ ತೆಗೆಸಿದರು.