ಆನೇಕಲ್: ರನ್ನಿಂಗ್ ಬೈಕ್ ಮೇಲೆ ದಿಡೀರ್ ಬಿದ್ದ ಟಾರ್ಪಲ್.. ಪಾಪ ಬೈಕ್ ಸವಾರ! ಬನ್ನೇರುಘಟ್ಟದಲ್ಲಿ ಬೈಕ್ ಸವಾರ ಪಟ್ಟ ಪಾಡು ನೋಡಿ!
ಸಪ್ಟೆಂಬರ್ 27 ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಮೇಲೆ ಟಾರ್ಪಲ್ ಒಂದು ದಿಢೀರ್ ಬಿದ್ದಿದೆ. ಪರಿಣಾಮ ಬೈಕ್ ಸವಾರ ಕೂದಲೆಳೆಯ ಅಂತರದಲ್ಲಿ ಬಚಾವಾಗಿದ್ದಾನೆ. ಹಿಂದಗಡೆ ಬರ್ತಾ ಇದ್ದ ಕಾರು ಅಂತರದಲ್ಲಿ ಇದ್ದ ಕಾರಣದಿಂದ ಬೈಕ್ ಸವಾರ ಬಚಾವಾಗಿದ್ದಾನೆ. ಟ್ರಕ್ಕಿಂದ ಟಾರ್ಪಲ್ ಕೆಳಗೆ ಬಿದ್ದರೂ ಕೂಡ ಟ್ರಕ್ ಚಾಲಕ ಗಮನ ಕೊಡದೆ ಹಾಗೆ ಹೋಗಿರೋದು ಆಕ್ರೋಶಕ್ಕೆ ಕಾರಣವಾಗಿದೆ.