ಹುಬ್ಬಳ್ಳಿಯ ವಿದ್ಯಾನಗರದ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿ 5 ರಲ್ಲಿ ಡಾ. ಎಮ್.ವಿ ಮಿಣಜಗಿ ಆರ್ಟ್ ಗ್ಯಾಲರಿ ಸಮಿತಿ ವತಿಯಿಂದ ಇಂದು ಜರುಗಿದ "ಮೈ ಜರ್ನಿ" ಸುಜಾತಾ ಪವಾರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪಾಲ್ಗೊಂಡು, ಉದ್ಘಾಟನೆ ನೆರವೇರಿಸಿ, ಮಾತನಾಡಿ, ಚಿತ್ರಕಲಾ ವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ. ಎಮ್.ವಿ ಮಿಣಜಗಿ ಆರ್ಟ್ ಗ್ಯಾಲರಿ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಬಿ.ಗರಗ, ಹುಡಾ ಮಾಜಿ ಅಧ್ಯಕ್ಷರಾದ ನಾಗೇಶ ಕಲಬುರ್ಗಿ, ಸಾಯಿ ಗ್ರುಪ್ ಆಫ್ ಇಂಡಸ್ಟ್ರೀಜ್ ಎಂ.ಡಿ ಶ್ರೀ ನಾರಾಯಣ ನಿರಂಜನ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮಹೇಶ್ ಬುರ್ಲಿ ಸೇರಿದಂತೆ ಉಪಸ್ಥಿತಿ ಇದ್ದರು..