ಬೇಲೂರು: ಹಳೇಗೆಂಡೇಹಳ್ಳಿ ಬಳಿ ಸಮೀಕ್ಷೆಗೆ ತೆರಳುತ್ತಿದ್ದ ಮತ್ತೊಬ್ಬ ಶಿಕ್ಷಕಿ ಮೇಲೆ ಬೀದಿನಾಯಿ ದಾಳಿ: ಕೈ ಮುರಿತ
Belur, Hassan | Oct 7, 2025 ಹಾಸನ: ಸಮೀಕ್ಷೆಗಾಗಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಶಿಕ್ಷಕಿಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇ ಗೆಂಡಿಹಳ್ಳಿ ಗ್ರಾಮದಲ್ಲಿ ಇಂದು ನಡೆದಿದ್ದು ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಸ್ಕೂಟಿಯಿಂದ ಬಿದ್ದು ಶಿಕ್ಷಕಿಯ ಎಡಗೈ ಮುರಿದಿದೆ. ಗೆಂಡೆಹಳ್ಳಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಲುಕ್ನಾ ಗಾಯಗೊಂಡ ಶಿಕ್ಷಕಿಯಾಗಿದ್ದು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಲು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಶಿಕ್ಷಕಿ ಲುಕ್ನಾ ಅವರು ಸ್ಕೂಟಿ ನಿಲ್ಲಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೀದಿ ನಾಯಿಗಳ ಗುಂಪು ದಾಳಿ ಮಾಡಿದೆ. ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಅವರು ಭಯದಿಂದ ಸ್ಕೂಟಿಯಿಂದ ಕೆಳಗೆ ಬಿದ್ದಿದ್ದಾರೆ