ಜೇವರ್ಗಿ: ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ರಾಜು ದೊರೆ ಆಯ್ಕೆ, ಪಟ್ಟಣದಲ್ಲಿ ಹರ್ಷೋತ್ಸವ
ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ರಾಜು ದೊರೆ ಆಯ್ಕೆ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ರಾಜು ದೊರೆ ಆಯ್ಕೆಯಾದ ಹಿನ್ನಲೆ ಇಂದು ಜೇವರ್ಗಿ ತಾಲ್ಲೂಕಿನ ವಿವಿಧ ಕಾರ್ಮಿಕ ಸಂಘಟನೆಗಳಿಂದ ನೂತನ ಅಧ್ಯಕ್ಷರಿಗೆ ಸನ್ಮಾನಿ ಹರ್ಷೋತ್ಸವ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಎನ್ಸಿಎಲ್ ಜಿಲ್ಲಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ತಾಲೂಕು ಅಧ್ಯಕ್ಷ ಶೇಖ ಮಕಬುಲ್, ಉಪಾಧ್ಯಕ್ಷ ನಾಗೇಶ ಲಖಣಾಪೂರ, ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಕಲ್ಲೂರ, ಕಾರ್ಯದರ್ಶಿ ಶಮಸೂದ್ದೀನ್, ಜನಸೇನೆ ಕಟ್ಟಡ ಕಾರ್ಮಿಕ ಮೌನೇಶ್ ಗುತ್ತೇದಾರ್ ಹಾಗೂ ಜಿಪಿಎಸ್ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಂದೇನವಾಜ ನದಾಫ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.