ದೇವನಹಳ್ಳಿ: ರೈತರ ಜಮೀನಿನಲ್ಲಿ ನ್ಯಾಲಯದ ಕಟ್ಟಡ ಬೇಡ ಪಟ್ಟಣದ ಹೊರವಲಯದಲ್ಲಿ ಸ್ಥಳೀಯ ರೈತರ ಪ್ರತಿಭಟನೆ
ರೈತರ ಜಾಗದಲ್ಲಿ ಕೋರ್ಟ್ ಕಟ್ಟಡ ಬೇಡ: ಧನಂಜಯ್ ದೇವನಹಳ್ಳಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯ ನಿರ್ಮಾಣ ವಿವಾದದ ಜಾಗದಲ್ಲಿ ಸುದ್ದಿಗಾರರೊಂದಿಗೆ ರೈತರು, ಜಮೀನಿನ ಮಾಲಿಕರು ಮಾತನಾಡಿದರು ದೇವನಹಳ್ಳಿ: ನ್ಯಾಯಾಲಯ ಬೇಕು. ಆದರೆ, ರೈತರ ಹೊಟ್ಟೆಮೇಲೆ ಹೊಡೆದು ಕಟ್ಟುವುದು ಬೇಡ, ಬೇರೆಡೆ ಜಾಗ ಇದೆ ಗುರುತಿಸಿ ಸ್ಥಳಾಂತರಿಸಿ, 63 ಎಕರೆ 70 ಜನಕ್ಕೆ ಮಂಜೂರಾಗಿದೆ. ಆರ್ಟಿಸಿ, ಎಂಆರ್ ಮತ್ತು ಸಾಗುವಳಿ ಚೀಟಿ ಇದ್ದ ರೈತರಿಗೆ ಇಷ್ಟೊಂದು ಹಿಂಸೆ ಕೊಡುವುದು ಎಷ್ಟು ಸರಿ ಎಂದು ಎಸ್.ಎಲ್.ಎಸ್ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಮತ್ತು ಜಮೀನಿನ ಮಾಲಿಕರಾದ ಧನಂಜಯ್ ಹೇಳಿದರು.