ಆನೇಕಲ್: ಕಮ್ಮಸಂದ್ರ ಅಗ್ರಹಾರದಲ್ಲಿ ನೂತನ ಗ್ರಂಥಾಲಯ ಹಾಗೂ ಅಂಬೇಡ್ಕರ್ ಭವನ ಉದ್ಘಾಟನೆ ಮಾಡಿದ ಆನೇಕಲ್ ಶಾಸಕ ಶಿವಣ್ಣ
ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಸಂದ್ರ ಅಗ್ರಹಾರ ಗ್ರಾಮದಲ್ಲಿ ನೂತನವಾಗಿ ಗ್ರಂಥಾಲಯ ಹಾಗೂ ಅಂಬೇಡ್ಕರ್ ಭವನವನ್ನ ಇಂದು ಉದ್ಘಾಟನೆ ಮಾಡಲಾಯಿತು. ಅನೇಕ ಶಾಸಕ ಶಿವಣ್ಣ ಹಾಗೂ ಬ್ಯಾಗಡದೇನಹಳ್ಳಿ ಪಂಚಾಯತಿ ಸದಸ್ಯರು ನೂತನ ಗ್ರಂಥಾಲಯ ಹಾಗೂ ಅಂಬೇಡ್ಕರ್ ಭವನವನ್ನ ಉದ್ಘಾಟಿಸಿದರು. ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ಗ್ರಂಥಾಲಯ ಉಪಯೋಗವಾಗಲಿದೆ ಹೀಗಾಗಿ ಪ್ರತಿ ಗ್ರಾಮದಲ್ಲೂ ಗ್ರಂಥಾಲಯಗಳು ನಿರ್ಮಾಣವಾಗಬೇಕು ಎಂದು ಶಾಸಕ ಶಿವಣ್ಣ ತಿಳಿಸಿದರು. ಜೊತೆಗೆ ನೂತನವಾಗಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನವನ್ನು ಶಾಸಕರು ಇದೇ ವೇಳೆ ಉದ್ಘಾಟಿಸಿದರು