ಬೆಂಗಳೂರು ದಕ್ಷಿಣ: ಶಿಕ್ಷಕರಿಗೆ ಗುಡ್ ನ್ಯೂಸ್ DCM ಡಿಕೆ ಶಿವಕುಮಾರ್ ಹೇಳಿದ್ದೇನು? ಕೋರ ಮಂಗಲದಲ್ಲಿ ಡಿಕೆ ಅನೌನ್ಸ್ಮೆಂಟ್!
ಅಕ್ಟೋಬರ್ 19 ಸಂಜೆ 6 ಗಂಟೆಗೆ DCM ಡಿಕೆಶಿ ಶಿಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೋರ ಮಂಗಲದಲ್ಲಿ ಈ ಬಗ್ಗೆ DCM ಮಾತನಾಡಿದ್ದು ಅಕ್ಟೋಬರ್ 24 ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಬೆಂಗಳೂರಿನಲ್ಲಿ ಮುಗಿಯಬೇಕು ಅಂತ ಡೆಡ್ ಲೈನ್ ಕೊಡಲಾಗಿತ್ತು. ಆದ್ರೆ ಮುಗಿಯುವ ಲಕ್ಷಣ ಕಾಣಿಸ್ತಾ ಇಲ್ಲ. ಈ ಹಿನ್ನಲೆ ಶಾಲೆ ಆರಂಭ ಆದ ಮೇಲೆ ಟೀಚರ್ಸ್ ಸಮೀಕ್ಷೆಗೆ ಬಳಕೆ ಮಾಡೋ ಹಾಗಿಲ್ಲ ಅಂತ ಸೂಚನೆ ಕೊಡಲಾಗಿದೆ. ಅದರೊಂದಿಗೆ ಟೀಚರ್ಸ್ಗೆ ಸಮೀಕ್ಷೆಯಿಂದ ರಿಯಾಯಿತಿ ಕೊಟ್ಟಿರುವುದು ಟೀಚರ್ಸ್ ಗೆ ಶುಭ ಸುದ್ದಿಯಾಗಿದೆ.