ಹುಬ್ಬಳ್ಳಿ: ಬೇರೊಬ್ಬರ ಹೆಸರಿನಲ್ಲಿ ನಕಲಿ ದಾಖಲೆ ಸಲ್ಲಿಸಿ, ಹುಡಾ ಮೂಲಕ ನಿವೇಶನದ ಕ್ರಯಪತ್ರ ಮಾಡಿಸಿಕೊಂಡ ಆರೋಪದಡಿ ಮಹಿಳೆ ವಿರುದ್ಧ ನಗರದ ಗೋಕುಲರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸವದತ್ತಿಯ ಮಹಾದೇವಿ ರುದ್ರಪ್ಪ ಕಾವಲಾಪುರ ವಿರುದ್ಧ ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಮಹಾಂತೇಶ ನರಸಪ್ಪನವರ ದೂರು ದಾಖಲಿಸಿದ್ದಾರೆ. ಶಾಂತಾ ಮಹಾಂತಪ್ಪ ಶಿರಹಟ್ಟಿ ಹೆಸರಿನಲ್ಲಿ ರಾಯನಾಳ ಗ್ರಾಮದಲ್ಲಿನ ನಿವೇಶನದ ಶುದ್ಧ ಕ್ರಯಪತ್ರ ಮಾಡಿಕೊಡುವಂತೆ ಆರೋಪಿ ಮಹಿಳೆಯು ನಕಲಿ ದಾಖಲೆಗಳನ್ನು ಹುಡಾಕ್ಕೆ ಸಲ್ಲಿಸಿದ್ದರು. ಇದನ್ನು ನಂಬಿ ಕ್ರಮಪತ್ರ ಮಾಡಿಕೊಡಲಾಗಿತ್ತು. ಕ್ರಯಪತ್ರವನ್ನು ಉಪನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಿದ್ದು, ಈ ಮೂಲಕ ಹುಡಾ ಹಾಗೂ ನಿವೇಶನದ ಮಾಲೀಕರಿಗೆ ಮೋಸ ಮಾಡಿದ್ದಾಗಿ ದೂರ