ಕೋಣಂದೂರಿನ ಸೋಣಗನಕೇರಿಯ ಮನೆಯೊಂದರಲ್ಲಿ ಮಧ್ಯರಾತ್ರಿ ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಹಾಗೂ ಹಣವನ್ನು ದೋಚಿದ್ದಾರೆ. ಈ ಹಿನ್ನೆಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಗುರುವಾರ ಬೆಳಿಗ್ಗೆ 7 ಗಂಟೆಗೆ ಪ್ರಕರಣ ದಾಖಲಾಗಿದೆ. ಕಳ್ಳರು ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ. ಮನೆ ಪ್ರವೇಶಿಸಿದ ಕಳ್ಳರು ರೂಮ್ನಲ್ಲಿದ್ದ ಗಾಡ್ರೇಜ್ ಬೀರುವನ್ನು ಸುಲಭವಾಗಿ ತೆರೆದಿದ್ದಾರೆ. ಬೀರುವಿಗೆ ಬೀಗ ಹಾಕಿರದ ಕಾರಣ ಅಲ್ಲಿಟ್ಟಿದ್ದ ಸುಮಾರು 40,000 ರೂಪಾಯಿ ನಗದು ಹಣವನ್ನು ಮೊದಲು ದೋಚಿದ್ದಾರೆ. ತದನಂತರ ಇನ್ನೊಂದು ಬೀರುವಿನಲ್ಲಿದ್ದ ಸುಮಾರು 4.50 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ತೂಕದ ಮಾಂಗಲ್ಯ ಸರ ಸೇರಿ 6 ಲಕ್ಷ 90 ಸಾವಿರ ವಸ್ತು ದೋಚಿದ್ದಾರೆ.