ಯಲ್ಲಾಪುರ: ಪಟ್ಟಣದ ಈಶ್ವರಗಲ್ಲಿ ಅನಂತನಾಗ ಸನ್ನಿಧಾನದಲ್ಲಿ ವಿಶೇಷ ಪೂಜೆ, ಸಾಮೂಹಿಕ ಅಶ್ಲೇಷಾ ಬಲಿಪೂಜೆ,ಮಹಾಮಂಗಳಾರತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಶ್ರೀದೇವರಿಗೆ ವಿಶೇಷ ಹೂವಿನ ಅಲಂಕಾರ ಆಕರ್ಷಣಿಯವಾಗಿತ್ತು. ಅಪಾರಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀನಾಗದೇವರಿಗೆ ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ದೇವಿ ಮೈದಾನ ಬಳಿಯ ಶ್ರೀ ನಾಗದೇವರ ವಾರ್ಷಿಕೋತ್ಸವ ಶೃದ್ಧಾ ಭಕ್ತಿಯಿಂದ ನಡೆಯಿತು.