ಹೆಗ್ಗಡದೇವನಕೋಟೆ: ತಾಲ್ಲೂಕಿನಲ್ಲಿ ಸ್ವ-ಸಹಾಯ ಸಂಘಗಳಿಂದ 12 ವರ್ಷದಲ್ಲಿ ₹17.10 ಕೋಟಿ ಉಳಿತಾಯ: ಪಟ್ಟಣದಲ್ಲಿ ಎಸ್ಕೆಡಿಆರ್ಡಿಪಿ ಪ್ರಾದೇಶಿಕ ನಿರ್ದೇಶಕ
ತಾಲ್ಲೂಕಿನಲ್ಲಿ ಇದುವರೆಗೂ 2,825 ಸ್ವಸಹಾಯ ಸಂಘಗಳನ್ನು ರಚನೆ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ್ ತಿಳಿಸಿದರು.ಹೆಚ್.ಡಿ ಕೋಟೆ ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 2,825 ಸಹಾಯ ಸಂಘಗಳಿಂದ ಸುಮಾರು 24,532 ಸದಸ್ಯರಿದ್ದಾರೆ. ಕಳೆದ 12 ವರ್ಷಗಳಲ್ಲಿ ಈ ಸದಸ್ಯರಿಂದ ₹17.10 ಕೋಟಿ ಹಣ ಉಳಿತಾಯ ಮಾಡಲಾಗಿದ್ದು, ಎಸ್ಬಿಐ ಬ್ಯಾಂಕ್ಗಳಲ್ಲಿ ಜಮೆ ಮಾಡಲಾಗಿದೆ ಎಂದರು.