ಚಿತ್ರನಟ ಸುದೀಪ್ ಅಭಿನಯದ ಮಾರ್ಕ್ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನಲೆ ಚಾಮರಾಜನಗರದಲ್ಲಿ ಸುದೀಪ್ ಅಭಿಮಾನಿಗಳು ಬೃಹತ್ ಬೈಕ್ ರ್ಯಾಲಿ ನಡೆಸಿ ಸಂಭ್ರಮಾಚರಣೆ ನಡೆಸಿದರು. ಚಾಮರಾಜನಗರದ ಪ್ರವಾಸಿ ಮಂದಿರದಿಂದ 500 ಕ್ಕೂ ಅಧಿಕ ಬೈಕ್ ಗಳು, ಆಟೋಗಳು ಸುದೀಪ್ ಪೋಟೋ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಸಿದರು. ನಗರದ ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ ಅಭಿಮಾನಿಗಳು ಸುದೀಪ್ ಗೆ ಜೈಕಾರ ಕೂಗಿ ಖುಷಿಪಟ್ಟರು.