ಧಾರವಾಡ: ನಗರದಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದ ಶಾಸಕ ಅರವಿಂದ್ ಬೆಲ್ಲದ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡ ಶಹರದ ನೆಹರು ನಗರ, ಆಂಜನೇಯ ನಗರ, ತೇಜಸ್ವಿ ನಗರ ಹಾಗೂ ರಾಜೀವಗಾಂಧಿ ನಗರದ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ   ಫಲಾನುಭವಿಗಳಿಗೆ ಶಾಸಕರಾದ ಅರವಿಂದ್ ಬೆಲ್ಲದ್ ಅವರು  ಹಕ್ಕು ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ  ಮಂಜುನಾಥ ಮಲ್ಲಿಗವಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಗರಗ, ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಕಲಾ ಕೊಟಬಾಗಿ, ಮುಖಂಡರಾದ  ಬಸವನಗೌಡ ಪಾಟೀಲ್,  ಪರಶುರಾಮ ಮಾನೆ, ಶ್ರೀಮತಿ ಶೋಭಾ ಭುಜಂಗನವರ, ಶ್ರೀಮತಿ ಹೇಮಾ ಹಂಚಿನಮನಿ,  ಪರಶುರಾಮ ಸಾಖರೆ ಸೇರಿದಂತೆ ಉಪಸ್ಥಿತಿ ಇದ್ದರು.