ಕಲಬುರಗಿ: ಇವರು ಕಾಪ್ ಆಫ್ ದ ಮಂಥ್: ನಗರದಲ್ಲಿ ಪೊಲೀಸರಿಗೆ ಆಯುಕ್ತರಿಂದ ಪ್ರಶಂಸನಾ ಪತ್ರ
ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಶ್ರೇಷ್ಠ ಕಾರ್ಯನಿರ್ವಹಣೆ ತೋರಿದ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ. ಅವರು, COP OF THE MONTH ಎಂದು ಗುರುತಿಸಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ. ಸಮಾಜ ಸೇವೆ ಮತ್ತು ಶಿಸ್ತಿನ ಕಾರ್ಯದ ಮೂಲಕ ಪೊಲೀಸ್ ಇಲಾಖೆಗೆ ಕೀರ್ತಿ ತಂದ ಅಧಿಕಾರಿಗಳನ್ನು ಆಯುಕ್ತರು ಶ್ಲಾಘಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಣೆಗಾರಿಕೆಯಿಂದ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದರು ಎಂದು ಮಂಗಳವಾರ 6 ಗಂಟೆಗೆ ಪೊಲೀಸರು ತಿಳಿಸಿದ್ದಾರೆ..