ನಾಗಮಂಗಲ : ಪಕ್ಷದ ಹೈಕ ಮಾಂಡ್ ತೀರ್ಮಾನಕ್ಕೆ ನಾವೆಲ್ಲರು ಬದ್ದವಾಗಿದ್ದು ಸಿಎಂ ಡಿ ಸಿ ಎಂ ಇಬ್ರುನೂ ಅನೋನ್ಯವಾಗಿ ದೆಹಲಿಗೆ ಹೋಗಿ ತೀರ್ಮಾನ ಮಾಡಿಕೊಂಡು ಬರ್ತಾರೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ. ರಾಜ್ಯದಲ್ಲಿ ಪವರ್ ಶೇರಿಂಗ್ ಜಟಾಪಟಿ ಹಿನ್ನಲೆಯಲ್ಲಿ ನಾಗಮಂಗಲದಲ್ಲಿ ಶನಿವಾರ ಸಾಯಂಕಾಲ 4.30 ರ ಸಮಯ ದಲ್ಲಿ ಸುದ್ದಿಗಾರರಿಗೆ ಜೊತೆ ಮಾತನಾಡಿದ ಅವರು ಇವತ್ತು ಸಿಎಂ, ಡಿಸಿಎಂ ಇಬ್ಬರು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಮೀಟಿಂಗ್ ನಲ್ಲಿ ಏನಾಗಿದೆ ಅಂತಾ ನನಗೆ ಗೊತ್ತಿಲ್ಲ. ಬಹುಶಃ ಇಬ್ಬರು ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಅಂತಾ ಹೇಳಿದ್ದಾರೆ. ನಮಗೆ ಪಕ್ಷ ಮುಖ್ಯ ನಾವು ಬಿಜೆಪಿಯವರ ತರ ಕಿತ್ತಾಡಲ್ಲ ಎಂದು ತಿಳಿಸಿದರು