ಯಲ್ಲಾಪುರ: ಕಲ್ಮಠದ ಶಿವ ಮಂದಿರದಲ್ಲಿ ನಡೆದ ಕಾರ್ತಿಕೋತ್ಸವ
ಯಲ್ಲಾಪುರ ಪಟ್ಟಣದ ಕಲ್ಮಠ ಶಿವ ಮಂದಿರದಲ್ಲಿ ಕಾರ್ತಿಕೋತ್ಸವ ಶೃದ್ಧಾ ಭಕ್ತಿ ಯಿಂದ ನಡೆಯಿತು. ಕಾರ್ತಿಕೋತ್ಸವ ನಿಮಿತ್ತ ಶಿವನಿಗೆ ಹೂವಿನ ಅಲಂಕಾರ ,ವಿಶೇಷ ಪೂಜೆ , ಮಹಾ ಮಂಗಳಾರತಿ ಪ್ರಸಾದ ವಿತರಣೆ ಮೂಲಕ ಕಾರ್ತಿಕೋತ್ಸವವನ್ನು ಶೃದ್ಧಾ ಭಕ್ತಿ ಯಿಂದ ಸಂಭ್ರಮದಿAದ ನಡೆಯಿತು.ಪುರಾತನ ಕಲ್ಮಠ ದೇವಾಲಯದೊಳಗೆ ಬೆಳಗುತ್ತಿರುವ ಹಣತೆ ಗಳ ಸಾಲು ಭಕ್ತರ ಕಣ್ಮನ ಸೆಳೆಯುವಂತಿತ್ತು.ಪಟ್ಟಣದ ವಿವಿಧೆಡೆ ಯಿಂದ ಅಪಾರ ಸಂಖ್ಯೆ ಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವ ರಿಗೆ ಹಣ್ಣು ಕಾಯಿ ಅರ್ಪಿಸಿ , ಹಣತೆಗಳಿಂದ ದೀಪ ಬೆಳಗಿಸಿ ಶ್ರ್ರಿ ದೇವರ ಕೃಪೆಗೆ ಪಾತ್ರರಾದರು.ಇದೆ ಸಂದರ್ಭದಲ್ಲಿ ಕಲ್ಮಠ ದ ಆವರಣ ದಲ್ಲಿ ಶ್ರೀ ಚೌಡೇಶ್ವರಿ ದೇವಿ ಕಾರ್ತಿಕೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು.