ಕಲಬುರಗಿ : ಬೈಕ್ಗೆ ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ, ಟ್ಯಾಂಕರ್ನಲ್ಲಿ ಬೆಂಕಿ ಹೊತ್ತುಕೊಂಡು ಟ್ಯಾಂಕರ್ ಚಾಲಕ ಸಜೀವ ದಹನವಾದ ಘಟನೆ ತೆಲಂಗಾಣದ ಪಿಲ್ಲಿಗುಂಡು ಗ್ರಾಮದ ಬಳಿ ನಡೆದಿದ್ದು, ನ27 ರಂದು ಮಧ್ಯಾನ 3 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಚಿಂಚೋಳಿ ಪಟ್ಟಣದ ಸಿದ್ದಶ್ರೀ ಎಥೆನಾಲ್ ಘಟಕದಿಂದ ಎಥೆನಾಲ್ ತುಂಬಿಕೊಂಡು ಹೋಗ್ತಿರೋವಾಗ ಬೈಕ್ಗೆ ಡಿಕ್ಕಿಯಾಗಿ ಟ್ಯಾಂಕರ್ ಹೊತ್ತಿಯುರಿದಿದೆ.. ಘಟನೆಯಲ್ಲಿ ಹೂಡದಳ್ಳಿ ಗ್ರಾಮದ ಚಾಲಕ ನಿರಂಜನ ಜಮಾದರ್ (30) ಸಜೀವ ದಹನವಾಗಿದ್ದು, ಶಾಸಕ ಯತ್ನಾಳ್ ಒಡೆತನದ ಎಥೆನಾಲ್ ಫ್ಯಾಕ್ಟರಿಯಾಗಿದೆ.