ಮಲಪ್ರಭಾ ನದಿ ದಡದಲ್ಲಿ ಏಕಾಏಕಿ ಕಾಣಿಸಿಕೊಂಡ ಮೊಸಳೆ.ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ. ಬಾಗಲಕೋಟೆ ಜಿಲ್ಲೆಯ ಕಳಸ ಗ್ರಾಮದಲ್ಲಿ ಘಟನೆ.ರೈತ ಕೆಂಚನಗೌಡ ಪಾಟೀಲ್ ಎಂಬುವವರ ಹೊಲದಲ್ಲಿ ಏಕಾಏಕಿ ಕಾಣಿಸಿಕೊಂಡ ಮೊಸಳೆ. ಜಲಾಶಯದಲ್ಲಿ ಮೊಸಳೆಗಳಿದ್ದು, ನದಿಗೆ ನೀರು ಬಿಟ್ಟಿದ್ದರಿಂದ ಮೊಸಳೆ ಬಂದಿರೋ ಸಾಧ್ಯತೆ. ಮೊಸಳೆ ಕಾಣಿಸಿಕೊಂಡಿದ್ದರಿಂದ ಸುತ್ತಮುತ್ತಲಿನ ಕಳಸ, ಕಿತ್ತಲಿ, ಸುಳ್ಳ , ಗೋವಿನಕೊಪ್ಪ ಗ್ರಾಮಸ್ಥರಲ್ಲಿ ಆತಂಕ ಹೊಲ ಗದ್ದೆಗಳಿಗೆ ತೆರಳಲು ಭಯಪಡುವಂತಾದ ಗ್ರಾಮಸ್ಥರು. ಮೊಸಳೆ ಚಲನವಲನ ಮೊಬೈಲನಲ್ಲಿ ಸೆರೆ ಹಿಡಿದು ಕಂದಾಯ ಇಲಾಖೆಗೆ ಮಾಹಿತಿ ನೀಡಿದ ಸ್ಥಳೀಯರು. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿರೋ ಸ್ಥಳೀಯರು.