ತಿಪಟೂರು: ತಿಪಟೂರಿನಲ್ಲಿ ಕಾಡು ಹಂದಿ ಬೇಟೆಗಾರರ ಬಂಧನ
ತಿಪಟೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಗುರುವಾರ ಸಂಜೆ 5 ಗಂಟೆಯಲ್ಲಿ ತಿಮ್ಮ ಅಲಿಯಾಸ್ ಸೋಮಶೇಖರ್, ಭೂತರಾಜು, ಶ್ರೀನಿವಾಸ್, ಶ್ರೀನಿವಾಸಪ್ಪ ಹಾಗೂ ಕುಮಾರ್ ಎಂಬ ಐವರು ಆರೋಪಿಗಳನ್ನು ಕಾಡು ಹಂದಿ ಬೇಟೆಯಾಡಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಬುಕ್ಕಾಪಟ್ಟಣ ವಲಯದ ಅರಣ್ಯ ವ್ಯಾಪ್ತಿಯಲ್ಲಿ ನಡೆದ ಈ ಕೃತ್ಯಕ್ಕೆ ಬಳಸಿದ 5 ಬೈಕುಗಳು, ವಿದ್ಯುತ್ ತಂತಿಗಳು, ಚಾಕು ಚೂರಿ, ಮೊಬೈಲ್ ಮತ್ತು ಮರದ ತುಂಡನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಭಾರತ್ ತಳವಾರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.