ಕಲಬುರಗಿ : ರಾಜ್ಯದಲ್ಲಿ ಅವರ ಹಿಂಬಾಲಕರೇ ಅಕ್ರಮವಾಗಿ ಮರಳು ಅಕ್ಕಿ ಸಾಗಾಟ ಮಾಡ್ತಿದಾರೆ.. ಅವರ ಬೆಂಬಲಿಗರೇ ಎಲ್ಲಾ ಅಕ್ರಮಗಳನ್ನ ಮಾಡ್ತಿದ್ದರು ಯಾರು ಪ್ರಶ್ನಿಸಬಾರದು.. ಪ್ರಶ್ನಿಸಬಾರದು ಅಂತಾನೇ ದ್ವೇಷ ಭಾಷಣ ನಿರ್ಬಂಧಕ ಕಾಯ್ದೆ ಜಾರಿ ಮಾಡಲು ಸರ್ಕಾರ ಮುಂದಾಗಿದೆ ಅಂತಾ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಕಿಡಿಕಾರಿದ್ದಾರೆ.. ಡಿಸೆಂಬರ್ 25 ರಂದು ಮಧ್ಯಾನ 12 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಇಷ್ಟೆಲ್ಲ ಅಕ್ರಮಗಳನ್ನ ಉಸ್ತುವಾರಿ ಸಚಿವರ ಬೆಂಬಲಿಗರೇ ಮಾಡ್ತಿದ್ದರು ಸಹ ಅವರ ಮೇಲೆ ಪೊಲೀಸರು ಕೆಸ್ ಹಾಕಲ್ಲ.. ಪೊಲೀಸರು ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಆಳ್ಮಕ್ಕಳು ಆಗಿದ್ದಾರೆಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ