ಕಲಬುರಗಿ: ಡಾ. ಶರಣಪ್ರಕಾಶ ಜಯದೇವ ಆಸ್ಪತ್ರೆ ಭೇಟಿ: ರೋಗಿಗಳ ಆರೈಕೆಗೆ ಮೆಚ್ಚುಗೆ
ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಸಂಸ್ಥೆಯ ನಿರ್ದೇಶಕರಾದ ಡಾ. ಬಿ. ದಿನೇಶ್ ಜೊತೆಗೂಡಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ ವಿವಿಧ ವಾರ್ಡ್ಗಳನ್ನು ಪರಿಶೀಲಿಸಿದರು. ರೋಗಿಗಳಿಂದ ನೇರ ಮಾಹಿತಿ ಪಡೆದು ಅವರ ಯೋಗಕ್ಷೇಮ ವಿಚಾರಿಸಿ, ಉತ್ತಮ ಸೇವೆ ನೀಡುತ್ತಿರುವ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಮಂಗಳವಾರ 12 ಗಂಟೆ ಸುಮಾರಿಗೆ ಭೇಟಿ ನೀಡಿದ್ದರು...