ಕಲಬುರಗಿ: ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಎಸ್ಐಟಿ, ಆರ್ಎಸ್ಎಸ್ ಮೇಲೆ ಬ್ರಹ್ಮಾಸ್ತ್ರ: ನಗರದಲ್ಲಿ ಜೆಡಿಎಸ್ ಅಧ್ಯಕ್ಷ ಬಾಲರಾಜ ಗುತ್ತೇದಾರ್
ಬಿಟ್ಟಿ ಭಾಗ್ಯದಲ್ಲಿ ಮುಳಗಿರುವ ರಾಜ್ಯ ಸರ್ಕಾರ ರೈತರ ಹಾಗೂ ಬಡ ಜನರ ನೇರವಿಗೆ ಬರುತ್ತಿಲ್ಲ, ರಾಜ್ಯದಲ್ಲಿ ಅಭಿವೃದ್ದಿ ಅನ್ನೋದು ಶ್ಯೂನ್ಯವಾಗಿದೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ವೋಟ್ ಚೋರಿ ಹೆಸರಿನಲ್ಲಿ ಎಸ್ಐಟಿ ತನಿಖೆ, ಆರ್ಎಸ್ಎಸ್ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿದೆ ಎಂದು ಶೆನಿವಾರ 4 ಗಂಟೆಗೆ ನಗರದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್ ವಾಗ್ದಾಳಿ ನಡೆಸಿದ್ದಾರೆ. ಇದೆವೇಳೆ ಕಲಬುರಗಿ ಜಿಲ್ಲೆಯಲ್ಲಿ ಮಳೆ, ಹೊಳೆಯಿಂದಾಗಿ ಸಾವಿರಾರು ರೈತ ಕುಟುಂಬಗಳು ಬಿದಿದ್ದು ಸಮೀಕ್ಷೆ ಹೆಸರಿನಲ್ಲಿ ಕಾಲಹರಣ ಮಾಡದೆ ಮಹಾರಾಷ್ಟ್ರ ಮಾದರಿಯಲ್ಲಿ ಮೊದಲು ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.