ಶಿರಸಿ: ಜು.23 ರಂದು ಶಿರಸಿ ನಗರ, ಬನವಾಸಿ, ಹುಲೇಕಲ್ ಭಾಗದಲ್ಲಿ ವಿದ್ಯುತ್ ವ್ಯತ್ಯಯ
ಶಿರಸಿ : ತುರ್ತು ಕಾಮಗಾರಿಯ ಹಿನ್ನಲೆಯಲ್ಲಿ ದಿನಾಂಕ 23-07-2025 ಬುಧವಾರ ದಿನದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರ ವರಗೆ ಶಿರಸಿ ನಗರದಾದ್ಯಂತ ( ಕೆ ಎಚ್ ಬಿ ಕಾಲೋನಿ,ಕಸ್ತೂರಬಾ ನಗರ ಹಾಗು ವಿವೇಕಾನಂದ ನಗರ ಹೊರತುಪಡಿಸಿ) ವಿದ್ಯುತ್ ವ್ಯತ್ಯಯವಾಗಲಿದೆ. ಅದೇ ರೀತಿ ಅಂದು ಗ್ರಾಮೀಣ ಪ್ರದೇಶವಾದ ಬನವಾಸಿ,ಸುಗಾವಿ,ದೇವನಳ್ಳಿ,ಚಿಪಗಿ,ಮಾರಿಗದ್ದೆ,ಕೆಂಗ್ರೆ,ವಾನಳ್ಳಿ,ಹುಲೇಕಲ್,ಸಾಲ್ಕಣಿ,ಸಂಪಖಂಡ,ತಾರಗೋಡ ಭಾಗದಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಹೆಸ್ಕಾಂ ತಿಳಿಸಿದೆ.